ಚಿಂಚೋಳಿ: ಕಲ್ಲೂರಿನಲ್ಲಿ ಜಾನುವಾರು ಕಳ್ಳತನಕ್ಕೆ ಯತ್ನ : ಕಳ್ಳರ ಕೃತ್ಯ ಸಿಸಿಟಿವಿಯಲ್ಲಿ ಸೆರೆ
ಚಿಂಚೋಳಿ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ನಸುಕಿನ ಜಾವದಲ್ಲಿ ಜಾನುವಾರು ಕಳ್ಳತನಕ್ಕೆ ಕಳ್ಳರು ಯತ್ನಿಸಿದ ಘಟನೆ ನಡೆದಿದೆ. ಟಾಟಾ ಸುಮೋ ವಾಹನದಲ್ಲಿ ಬಂದ ಕಳ್ಳರು, ಕಟ್ಟಿದ ಜಾನುವಾರುಗಳನ್ನು ಕಳವು ಮಾಡಲು ಪ್ರಯತ್ನಿಸಿದ್ದು, ಈ ದೃಶ್ಯಗಳು ಗ್ರಾಮದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ದಾಖಲಾಗಿವೆ. ಇತ್ತೀಚೆಗೆ ಜಾನುವಾರು ಕಳ್ಳತನದ ಘಟನೆಗಳು ನಿರಂತರವಾಗಿ ನಡೆಯುತ್ತಿದ್ದು, ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಹಂಚಿಕೊಂಡ ಗ್ರಾಮಸ್ಥರು, ಕಳ್ಳರನ್ನು ಶೀಘ್ರ ಬಂಧಿಸಲು ಭಾನುವಾರ 9 ಗಂಟೆಗೆ ಪೊಲೀಸರನ್ನು ಆಗ್ರಹಿಸಿದ್ದಾರೆ.