ಭದ್ರಾವತಿ: ಭದ್ರಾವತಿಯಲ್ಲಿ ಮಾಲೀಕನ ಸಾವಿನಿಂದ ನೊಂದು ಪ್ರಾಣ ಬಿಟ್ಟ ಶ್ವಾನ
ಭದ್ರಾವತಿಯಲ್ಲೊಂದು ಭಾನುವಾರ ಹೃದಯ ವಿದ್ರಾವಕ ಘಟನೆ ನಡೆದಿದೆ. ಮಾಲೀಕನ ಸಾವಿನ ಸುದ್ದಿ ತಿಳಿದು ಶ್ವಾನವೊಂದು ಸಹ ಪ್ರಾಣ ಬಿಟ್ಟಿದೆ. ಭದ್ರಾವತಿ ನಗರದ ಹುತ್ತಾಕಾಲೋನಿಯ ಜಿಂಕ್ಲೈನ್ ನಿವಾಸಿ 61 ವರ್ಷದ ಲಾರೆನ್ಸ್ ಪೈಂಟರ್ ಕೆಲಸ ಮಾಡುತ್ತಿದ್ದರು. ಮೆದುಳಿಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದ ಇವರು ಭಾನುವಾರ ನಿಧನರಾಗಿದ್ದರು. ಆಸ್ಪತ್ರೆಯಿಂದ ಮನೆಗೆ ತರಲಾದ ಲಾರೆನ್ಸ್ ಅವರ ಮೃತದೇಹವನ್ನು ಕಂಡ ಅವರ ಮನೆಯ ಶ್ವಾನವು ತೀವ್ರ ನೊಂದುಕೊಂಡಿದೆ. ಮಾಲೀಕನ ಮೃತದೇಹದ ಪಕ್ಕದಲ್ಲಿಯೇ ಮಲಗಿತ್ತು. ಅಲ್ಲೇ ಅಂತಿಮ ಉಸಿರೆಳೆದಿದೆ. ಲಾರೆನ್ಸ್ ಅಂತ್ಯಕ್ರಿಯೆ ಸೋಮವಾರ ಬೆಳಿಗ್ಗೆ 11 ಗಂಟೆಗೆ ನೆರವೇರಿಸಲಾಗಿದೆ.