ಚಿಮೆಗಾಂದಲ್ಲಿ ಹೈಟೆಕ್ ವಸತಿ ಸಹಿತ ಶಾಲೆ, ನಿರ್ಮಾಣವಾಗಲಿದೆ ಎಂದು ಶಾಸಕ ಪ್ರಭು ಚೌಹಾಣ್ ಅವರು ತಿಳಿಸಿದರು. ಕಟ್ಟಡ ನಿರ್ಮಾಣ ಸ್ಥಳಕ್ಕೆ ಶನಿವಾರ ಮಧ್ಯಾಹ್ನ 3:30ಕ್ಕೆ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಸಮೇತ ತೆರಳಿ ಪರಿಶೀಲಿಸಿದ ಬಳಿಕ ಮಾತನಾಡಿದ ಅವರು ₹20ಕೋಟಿ ಅನುದಾನದಲ್ಲಿ ಕೈಗೊ ಳುತ್ತಿರುವ ಈ ಕಟ್ಟಡ ಗುಣಮಟ್ಟದ ಜೊತೆಗೆ ನಿಗದಿತ ಅವಧಿ ಒಳಗೆ ಪೂರ್ಣಗೊಳಿಸುವಂತೆ ಸೂಚಿಸಿದರು.