ಯಲ್ಲಾಪುರ:ಪಟ್ಟಣದಲ್ಲಿ ಕೃೈಸ್ತ ಸಮುದಾಯದವರಿಂದ ಕ್ರಿಸಮಸ್ ಹಬ್ಬದ ಪೂವಭಾವಿಯಾಗಿ ಕೃೈಸ್ತ ಸಮುದಾಯದವರ ಆರಾಧ್ಯ ದೈವ ಯೇಸುಕ್ರಿಸ್ತನ ಮಹಿಮೆ ಹಾಗೂ ಸಂದೇಶ ಸಾರುವ ಕೆರೋಲ್ ಮೆರವಣಿಗೆ ನಡೆಯಿತು.ಹೋಲಿ ರೋಜರಿ ಚರ್ಚ್ ಆವರಣದಿಂದ ಪ್ರಾರಂಭವಾದ ಮೆರವಣಿಗೆಯೂ ಬಲೂನು,ವಿದ್ಯುತದೀಪ,ನಕ್ಷತ್ರ ಬುಟ್ಟಿಗಳಿಂದ ಸುಂದರವಾಗಿ ಅಲಂಕರಿಸಿದ ಯೇಸುಕ್ರಿಸ್ತನ ಭಾವಚಿತ್ರವಿರುವ ವಾಹನದಲ್ಲಿ ಪಟ್ಟಣದ ಕಾಳಮ್ಮ ನಗರ,ವಲಿಶಾಗಲ್ಲಿ,ಬಸ್ ನಿಲ್ದಾಣ ರಸ್ತೆ ಮಂಜುನಾಥ ನಗರ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಕ್ರೈಸ್ತಬಾಂದವರು ಯೇಸುಕ್ರಿಸ್ತನ ಬಾಲ್ಯ,ಮಹಿಮೆ ಹಾಗೂ ಸಂದೇಶ ಸಾರುವ ದೇವರ ನಾಮ ಹಾಡುತ್ತಾ ಹಾಗೂ, ಸ್ಥಬ್ದ ಚಿತ್ರ ಸಾಂತಾಕ್ಲೊಜಾ,ಮಕ್ಕಳ ವಿವಿಧ ಛದ್ಮವೇಷ,ನೃತ್ಯ ರೂಪಕ ಮೆರವಣಿಗೆಯ ಮೆರಗನ್ನು ಹೆಚ್ಚಿಸಿತ್ತು.