ಜೇವರ್ಗಿ: ಪಟ್ಟಣದಲ್ಲಿ ಪೊಲೀಸರ ಕಾರ್ಯಚರಣೆ: 6 ಮೊಬೈಲ್ ಗಳನ್ನು ಪತ್ತೆ, ವಾರಸುದಾರರಿಗೆ ಹಸ್ತಾಂತರ
ಜೇವರ್ಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಿಇಐಆರ್ ಪೊರ್ಟಲ್ ಮೂಲಕ 6 ಮೊಬೈಲ್ ಗಳನ್ನು ಪತ್ತೆ ಮಾಡಿ ವಾರಸುದಾರರಿಗೆ ಹಸ್ತಾಂತರಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇತ್ತೀಚಿಗೆ ಸಾರ್ವಜನಿಕರು ಕಳೆದುಕೊಂಡಿದ್ದ ಒಟ್ಟು 6 ಮೊಬೈಲ್ ಗಳನ್ನು CEIR portal ಮೂಲಕ ಪತ್ತೆ ಹಚ್ಚಲಾಗಿದೆ. ಜೇವರ್ಗಿ ಠಾಣೆಯ ಪಿಎಸ್‌ಐ ವಾರಸುದಾರರಿಗೆ ಮೊಬೈಲ್‌ಗಳನ್ನು ಹಸ್ತಾಂತರ ಮಾಡಿದರು ಎಂದು ಬುಧವಾರ 3 ಗಂಟೆಗೆ ಪೊಲೀಸರು ಮಾಹಿತಿ ನೀಡಿದ್ದಾರೆ.