ಹುಬ್ಬಳ್ಳಿ: ವ್ಯಕ್ತಿ ಓರ್ವ ಇನ್ಸ್ಟಾಗ್ರಾಮ್ ಐಡಿವೊಂದರಲ್ಲಿ ಕೋಮು ಗಲಭೆ ಸೃಷ್ಟಿಸುವ ವಿಡಿಯೋ ಹಂಚಿಕೊಂಡಿರುವ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಯಾನ್ಖಾನ್ -೧೮ ಎಂಬ ಹೆಸರಿನ ಇನ್ಸ್ಟಾಗ್ರಾಂ ಐಡಿಯಲ್ಲಿ ದಾವುದ ನದಾಫ್, ಜಿಲಾನಿ ನದಾಫ್, ಇನ್ನು ನದಾಫ್ ಹಾಗೂ ಇತರರು ಕುಳಿತುಕೊಂಡಿದ್ದು, ಒಬ್ಬ ವ್ಯಕ್ತಿ ಜಿಂದಗಿ ಸವಾರಿ ಎಂಬ ಹಿಂದಿ ಸಿನಿಮಾ ಹಾಡು ಹಾಕಿ ಇತ್ತೀಚೆಗೆ ಹತ್ಯೆಯಾದ ಮಲ್ಲಿಕ್ ಎನ್ನುವ ವ್ಯಕ್ತಿ ಚಿತ್ರ ಹಾಕಿದ್ದಾರೆ. ಇನ್ನೂ ರಿವೇಂಜ್ ಸೂನ್, ಮೌಥ್ ಕೆ ಬದಲೆ ಮೌಥ್ ಹೊತಿ ಹೈ ಎಂದು ವಿಡಿಯೋದಲ್ಲಿ ಕಮೆಂಟ್ ಮಾಡಿ, ಜನರಲ್ಲಿ ದ್ವೇಷ, ವೈಮನಸ್ಸು ಭಾವನೆ ಸೃಷ್ಟಿಸಿ, ಬೆದರಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.