ಚಳ್ಳಕೆರೆ: ಬೇಡರೆಡ್ಡಿಹಳ್ಳಿ ಗ್ರಾಮದಿಂದ ಶಬರಿಮಲೈ ಅಯ್ಯಪ್ಪನ ಯಾತ್ರೆ ಆರಂಭಿಸಿದ ಮಾಲಾಧಾರಿಗಳು
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬೇಡರೆಡ್ಡಿಹಳ್ಳಿ ಗ್ರಾಮದಲ್ಲಿ ಶಬರಿಮಲೈ ಅಯ್ಯಪ್ಪ ಸ್ವಾಮಿಯ ಮಾಲಾಧಾರಿಗಳು ಯಾತ್ರೆ ಕೈಕೊಂಡಿದ್ದಾರೆ. ಸತತ 40 ಕ್ಕೂ ಹೆಚ್ಚು ದಿನಗಳ ಕಾಲ ವೃತ ಮುಗಿಸಿ, ಯಾತ್ರೆ ಆರಂಭಿಸಿದ್ದಾರೆ. ಗ್ರಾಮದ ಪೌಳಿ ಆವರಣದಲ್ಲಿ ಇರುಮುಡಿ ಕಟ್ಟಿಕೊಂಡು ಭಕ್ತಿ ಭಾವದಿಂದ ಯಾತ್ರೆ ಆರಂಭಿಸಿದ್ದಾರೆ. ಗುರುಸ್ವಾಮಿಗಳಾದ ವೆಂಕಟೇಶ್ ಸ್ವಾಮಿ, ನಾಗರಾಜ್ ಸ್ವಾಮಿ, ಬೋರಣ್ಣ ಸ್ವಾಮಿ, ಬಸವರಾಜ್ ಸ್ವಾಮೀ ಸೇರಿ 40 ಕ್ಕೂ ಹೆಚ್ಚು ಮಾಲಾಧಾರಿಗಳು ಯಾತ್ರೆ ಹೊರಟಿದ್ದಾರೆ. ಈ ವೇಳೆ ಮಾಲಾಧಾರಿಗಳ ಭಕ್ತರು ಆಗಮಿಸಿ ಹೂ ಮಾಲೆ ಹಾಕಿ, ಕಾಣಿಕೆ ಕೊಟ್ಟು, ತಮ್ಮ ಭಕ್ತಿ ಸಮರ್ಪಿಸಿದರು. ಈ ವೇಳೆ ಭಕ್ತರಿಗೆ ಪ್ರಸಾದ ವಿನಿಯೋಗ ಕೂಡಾ ಮಾಡಲಾಯ್ತು. ಎರಡು ವಾಹನಗಳಲ್ಲಿ ಹೊರಟಿರುವ ಮಾಲಾಧಾರಿಗಳು ಪ್ರಯಾಣ ಬೆಳೆಸಿದರು