ಬೆಂಗಳೂರು ದಕ್ಷಿಣ: ದಸರಾ ಇತಿಹಾಸ ವಿಚಾರಗೋಷ್ಠಿಯಲ್ಲಿ 'ದಸರಾ ನಮ್ಮ ಸಾಂಸ್ಕೃತಿಕ ಉತ್ಸವ' ವಿಷಯ ಮಂಡಿಸಿದ ಪತ್ರಕರ್ತ ಅಜಿತ್ ಹನಮಕ್ಕನವರ್
ಪರಿವರ್ತನಾ ಟ್ರಸ್ಟಿನ ವತಿಯಿಂದ ಮೈಸೂರು ದಸರಾ ಇತಿಹಾಸ ಮತ್ತು ನಡವಳಿಕೆಯ ಸಾಂಸ್ಕೃತಿಕ ಪರಂಪರೆ ಎನ್ನುವ ವಿಷಯದ ಕುರಿತು ವಿಚಾರಗೋಷ್ಠಿ ಜಯನಗರದ ಯುವಪಥ ಸಭಾಂಗಣದಲ್ಲಿ ಮಂಗಳವಾರ ಬೆಳಗ್ಗೆ ೧೦ಕ್ಕೆ ನಡೆಯಿತು. 'ದಸರಾ ನಮ್ಮ ಸಾಂಸ್ಕೃತಿಕ ಉತ್ಸವ' ವಿಷಯದ ಕುರಿತು ಪತ್ರಕರ್ತ ಅಜಿತ್ ಹನಮಕ್ಕನವರ್ ವಿಷಯವನ್ನು ಮಂಡಿಸಿದರು. 'ಮೈಸೂರು ಮಹಾಸಂಸ್ಥಾನದಲ್ಲಿ ದಸರಾ ಆಚರಣೆ' ವಿಷಯದ ಕುರಿತು ಮೈಸೂರು ರಾಜವಂಶಸ್ಥ, ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಒಡೆಯರ್ ವಿಷಯವನ್ನು ಮಂಡಿಸಿದರು. ವೇದಿಕೆಯಲ್ಲಿ ಪರಿವರ್ತನಾ ಟ್ರಸ್ಟಿನ ಕಾರ್ಯದರ್ಶಿ ಬಾಲಕೃಷ್ಣ ಪೈ, ಸಾಮಾಜಿಕ ಕಾರ್ಯಕರ್ತರಾದ ಶ್ರೀಕಾಂತ ಶೆಟ್ಟಿ ಕಾರ್ಕಳ, ರಾಜಣ್ಣ ಹೊನ್ನೇನಹಳ್ಳಿ ಉಪಸ್ಥಿತರಿದ್ದರು.