ಭಟ್ಕಳ: ಹೆಬಳೆ ದೇವಸ್ಥಾನದ ಹುಂಡಿ ಕಳ್ಳತನ, ಇಬ್ಬರು ಆರೋಪಿಗಳ ಬಂಧನ
ಭಟ್ಕಳ: ತಾಲೂಕಿನ ಹೆಬಳೆ ಗ್ರಾಮದ ಶ್ರೀ ಅರಿಕಲ್ ಜಟಕೇಶ್ವರ ದೇವಸ್ಥಾನದ ಹುಂಡಿ ಕದ್ದಿದ್ದ ಈರ್ವರು ಆರೋಪಿಗಳನ್ನು ಎರಡು ಬೈಕ್ ಸಮೇತವಾಗಿ ಬಂಧಿಸಿ ಸುಮಾರು 2.21 ಲಕ್ಷ ರೂ ಸ್ವತ್ತನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಶಿರಾಲಿಯ ಅಮೀರ್ ಹಸನ್ ಬ್ಯಾರಿ ಹಾಗು ಭಟ್ಕಳದ ಮಹ್ಮದ್ ಇಮ್ರಾನ್ ಅಬ್ದುಲ್ ಗಫಾರ್ ಬಂಧಿತ ಆರೋಪಿಗಳಾಗಿದ್ದಾರೆ ಡಿವಾಯಸ್ಪಿ ಮಹೇಶ ಕೆ ಎಮ್ ಮಾರ್ಗದರ್ಶನ ಹಾಗು ಸಿಪಿಆಯ್ ಮಂಜುನಾಥ ಲಿಂಗಾರೆಡ್ಡಿ ನೇತ್ರತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಪಿಎಸ್ಆಯ್ ರನ್ನಗೌಡಾ ಮತ್ತು ಭರಮಪ್ಪ ಹಾಗು ಸಿಬ್ಬಂದಿಗಳು ಪಾಲ್ಗೊಂಡಿದ್ದರು