ಆಳಂದ: ರೈತನ ಕಣ್ಣೆದುರೆ ಹಳ್ಳದ ನೀರಿನಲ್ಲಿ ಕೊಚ್ಚಿಕೊಂಡು ಹೋದ ಹಸು: ಭೂಸನೂರ ಗ್ರಾಮದಲ್ಲಿ ಘಟನೆ
ಕಲ್ಬುರ್ಗಿ ಜಿಲ್ಲೆಯಲ್ಲಿ ಮಳೆಯ ಅವಾಂತರ ಮುಂದುವರೆದಿದೆ.. ಜಿಲ್ಲೆಯ ಆಳಂದ ತಾಲೂಕಿನ ಭೂಸನೂರ ಹಳ್ಳದ ನೀರಿನಲ್ಲಿ ಹಸುವೊಂದು ರೈತನ ಕಣ್ಣೇದುರಿಗೆ ಕೊಚ್ಚಿಕೊಂಡ ಹೋದ ದಾರುಣ ಘಟನೆ ನಡೆದಿದೆ. ಗ್ರಾಮದ ರೈತನೋರ್ವ ಜಲಾವೃತವಾದ ಸೇತುವೆ ಮೇಲಿಂದ ಹಸುಗಳನ್ನು ಪಡೆದುಕೊಂಡು ಹೋಗುವಾಗ ನೀರಿನ ರಭಸದಲ್ಲಿ ಒಂದು ಹಸು ಕೊಚ್ಚಿಕೊಂಡು ಹೋಗಿದೆ. ಕಣ್ಣೆದುರೇ ಘಟನೆ ನಡೆಯುತ್ತಿದ್ದರು ರೈತ ಹಾಗೂ ಇತರರು ಅಸಹಾಯಕರಾಗಿ ನಿಂತಿದ್ದರು.