ಕಲಬುರಗಿ : ತಲೆ ಸುತ್ತಿ ಬಿದ್ದಿದ್ದಕ್ಕೆ ದ್ವೇವ ಹಿಡಿದಿದೆ ಅಂತಾ ನನ್ನ ಸಹೋದರಿ ಮುಕ್ತಾಬಾಯಿಯನ್ನ ಬೇವಿನ ಕಟ್ಟಿಗೆಯಿಂದ ಹೊಡೆದು ಆಕೆಯ ಗಂಡನ ಮನೆಯವರು ಸಾಯಿಸಿದಾರೆಂದು ಮಹಾರಾಷ್ಟ್ರದ ಮುರುಮ್ ಗ್ರಾಮದಲ್ಲಿ ಕೊಲೆಯಾದ ಮುಕ್ತಾಬಾಯಿ ಸಹೋದರಿ ಶ್ರೀದೇವಿ ಹೇಳಿದ್ದಾರೆ.. ಡಿಸೆಂಬರ್ 27 ರಂದು ಮಧ್ಯಾನ 2 ಗಂಟೆಗೆ ಕಲಬುರಗಿಯಲ್ಲಿ ಮಾತನಾಡಿದ ಅವರು, ಇನ್ನೂ ಮುಕ್ತಾಬಾಯಿಗೆ ಮೆದುಳಿನಲ್ಲಿ ರಕ್ತಸ್ರಾವಾಗಿತ್ತು. ಇದರಿಂದ ಆಕೆ ತಲೆ ಸುತ್ತು ಬಿಳ್ತಿದ್ದಳು.. ಇದನ್ನೆ ಆಕೆಗೆ ದ್ವೇವ ಹಿಡಿದಿದೆ ಅಂತಾ ಭಾವಿಸಿ ದ್ವೇವ ಬಿಡಿಸಲು ಆಕೆಯ ಮನೆಯವರು ಕಟ್ಟಿಗೆಯಿಂದ ಹೊಡೆದು ಸಾಯಿಸಿದ್ದು, ಅವರು ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಶ್ರೀದೇವಿ ಆಗ್ರಹಿಸಿದ್ದಾರೆ