ಹುಬ್ಬಳ್ಳಿ: ನಗರದಲ್ಲಿ 15 ಕ್ಕೂ ಹೆಚ್ಚು ಯುವಕರ ಗುಂಪು ಸೇರಿ ಮಲ್ಲಿಕ್ ಎನ್ನುವ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗಿದ್ದ ಕೆಲ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಈ ನಡುವೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬೆಂಡಿಗೇರಿ ಠಾಣೆ ಇನ್ಸ್ಪೆಕ್ಟರ್ ಎಸ್.ಆರ್ ನಾಯಕ್ ನೇತೃತ್ವದ ತಂಡ ತನಿಖೆಗೆ ವೇಗ ನೀಡಿದ್ದು, ಪರಾರಿಯಾಗಿದ್ದ ಇನ್ನಿಬ್ಬರು ಆರೋಪಿಗಳಾದ ಅಭಿಷೇಕ್ ಜಾಧವ್ ಹಾಗೂ ಗಣೇಶ್ ಜಾಧವ್ರನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.