ಅರಸೀಕೆರೆ: ರಂಗಾಪುರ ಗ್ರಾಮದಲ್ಲಿ ಅಂಬೇಡ್ಕರ್,ಬಾಬುಜೀ ಭಾವಚಿತ್ರಕ್ಕೆ ಸಗಣಿ ಬಳಿದು ಅಪಮಾನ:ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ
ಅರಸೀಕೆರೆ : ಡಾ|| ಬಾಬಾಜಗಜೀವನ್‌ರಾಂ ಕ್ಷೇಮಾಭಿವೃದ್ದಿ ಸಂಘದಿAದ ಗ್ರಾಮದಲ್ಲಿ ಆಳವಡಿಸಿದ್ದ ಡಾ|| ಬಿ.ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನ್‌ರಾಮ್ ಭಾವಚಿತ್ರ ಇರುವ ಬೋರ್ಡಿಗೆ ಸವರ್ಣಿ ಜನಾಂಗದ ಕೆಲವೊಬ್ಬರು ರಾತ್ರೋರಾತ್ರಿ ಸಗಣಿ ಬಳಿದು ಅವಮಾನ ಮಾಡಿರುವ ಘಟನೆ ಅರಸೀಕೆರೆ ತಾಲ್ಲೂಕು ರಂಗಾಪುರ ಗ್ರಾಮದಲ್ಲಿ ನಡೆದಿದ್ದು ಗ್ರಾಮದಲ್ಲಿ ಉದಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.ಘಟನೆ ಖಂಡಿಸಿ ಈಗಾಗಲೇ ಈಗಾಗಲೇ ಗ್ರಾಮಸ್ಥರು ಹಾಗೂ ವಿವಿಧ ದಲಿತಪರ ಸಂಘಟನೆಗಳು ಸ್ಥಳದಲ್ಲೇ ಪ್ರತಿಭಟನೆ ಆರಂಭಿಸಿದ್ದು ಅಪಮಾನ ಮಾಡಿದ ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿದ್ದಾರೆ.ಸ್ಥಳಕ್ಕೆ ಈಗಾಗಲೇ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಕಿಡಿಗೇಡಿಗಳ ಬಂದನಕ್ಕೆ ಬಲೆ ಬೀಸಿದ್ದಾರೆ.