ಬಳ್ಳಾರಿ: ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ 9ನೇ ಸಾಂಸ್ಕೃತಿಕ ಜನೋತ್ಸವ ಸಮಾರೋಪ
ಪಂಡಿತ್ ತಾರಾನಾಥ ಅವರ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಆವಿಷ್ಕಾರ ಪ್ರಗತಿಪರ ವೇದಿಕೆಯಿಂದ 9ನೇ ಬಳ್ಳಾರಿ ಸಾಂಸ್ಕೃತಿಕ ಜನೋತ್ಸವ ಸಮಾರೋಪ ಸಮಾರಂಭ ಕಾರ್ಯಕ್ರಮ ಬಳ್ಳಾರಿ ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಭಾನುವಾರ ಸಂಜೆ ಆರು ಗಂಟೆಗೆ ಜರುಗಿತು. ಸಾಂಸ್ಕೃತಿಕ ಜನೋತ್ಸವ ಕಾರ್ಯಕ್ರಮದಲ್ಲಿ ಸಂಗೀತ ರಸಾಯನ, ಸಮೂಹ ನೃತ್ಯ, ಪ್ರಗತಿಪರ ಗೀತೆಗಳು, ನೃತ್ಯ ರೂಪಕ, ವಾದ್ಯ ಸಂಗೀತ, ನಾಟಕ, ಕಿರುನಾಟಕ, ಸಿನಿಮಾ ಪ್ರದರ್ಶನ ಸೇರಿದಂತೆ ಅನೇಕ ಕಾರ್ಯಕ್ರಮಗಳು ಜರುಗಿದವು.