ಹುಬ್ಬಳ್ಳಿ ನಗರ: ರೈಲ್ವೆಯಲ್ಲಿ ಸಾಗಿಸುತ್ತಿದ್ದ ಗಾಂಜಾ ವಶಪಡಿಸಿಕೊಂಡ ಹುಬ್ಬಳ್ಳಿ ರೈಲ್ವೆ ಪೊಲೀಸರು
ಹುಬ್ಬಳ್ಳಿ: ನರಸಾಪುರ-ಹುಬ್ಬಳ್ಳಿ ಅಮರಾವತಿ ರೈಲ್ವೆಯಲ್ಲಿ ಸಾಗಿಸುತ್ತಿದ್ದ 80 ಸಾವಿರ ರೂ. ಮೌಲ್ಯದ 8ಕೆಜಿ ಗಾಂಜಾವನ್ನು ಹುಬ್ಬಳ್ಳಿ ರೈಲ್ವೆ ಪೊಲೀಸರು ಜಪ್ತಿ ಮಾಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಲಾಗಿದೆ. ರೈಲಿನ ಮುಭಾಗದ ಜನರಲ್ ಬೋಗಿಯಲ್ಲಿ ಗಾಂಜಾ ಸಾಗಿಸಲಾಗುತ್ತಿತ್ತು. ಪಂಚರ ಸಮ್ಮುಖದಲ್ಲಿ ವಶಕ್ಕೆ ಪಡೆದಿದ್ದು, ಎನ್ಡಿಪಿಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.