ಕರ್ನಾಟಕ ಕೊಳಚೆ ನಿರ್ಮೂಲನೆ ಮಂಡಳಿ ವತಿಯಿಂದ ದೊರೆಯಬೇಕಾದ ವಸತಿ ಸೇರಿ ಇತರೇ ಮೂಲ ಸೌಲಭ್ಯಗಳು ಇನ್ನೂ ದೊರೆತಿಲ್ಲವೆಂದು ಹಳೆ ಬಾಗಲಕೋಟೆ ನಗರದ ಕೆಲ ನಿವಾಸಿಗಳು ಆರೋಪಿಸಿದ್ದಾರೆ.ಕಳೆದ ನಲವತ್ತು ವರ್ಷಗಳ ಹಿಂದೆ ಸರ್ವೆ ಮಾಡಿ ಫೋಟೊ ತೆಗೆಸಿಕೊಂಡು ಹೋದ ಅಧಿಕಾರಿಗಳು ಇದುವರೆಗೆ ಕಣ್ತೆರೆದು ನೋಡುತ್ತಿಲ್ಲವೆಂದು ಆರೋಪಿಸಿದ್ದಾರೆ.ಕೂಲಿ ಮಾಡಿಯೇ ಬದುಕುವ ಸ್ಥಿತಿ ಇದ್ದು ಸರ್ಕಾರಿ ಕಚೇರಿ ಅಲೆದಾಡುಚ ಶಕ್ತಿ ಇಲ್ಲ,ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ನ್ಯಾಯ ಒದಗಿಸಲು ಸ್ಥಳೀಯರು ಮನವಿ ಮಾಡಿದ್ದಾರೆ.