ಸಿಂದಗಿ: ಸಿಂದಗಿ ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ಸರಬರಾಜಿನಲ್ಲಿ ಎ.1 ರಿಂದ ಎ.3ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗುವುದು.
ಸಿಂದಗಿ ಪಟ್ಟಣದಲ್ಲಿನ 110/11 ಕೆವ್ಹಿ ವಿದ್ಯುತ್ ಕೇಂದ್ರ ಸಿಂದಗಿಯಲ್ಲಿ ಪರಿವರ್ತಕ ಬದಲಾವಣೆ ಮಾಡುವ ಹಿನ್ನಲೆಯಲ್ಲಿ ಎಪ್ರೀಲ್ 1 ರಿಂದ 3ರವರೆಗೆ ಸಿಂದಗಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜು ಆಗುವ ಗ್ರಾಮಗಳಿಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಉಪವಿಭಾಗ ಸಿಂದಗಿಯ ಸಹಾಯಕ ಅಭಿಯಂತರರು ಪಟ್ಟಣದಲ್ಲಿ ಶನಿವಾರ ಸಂಜೆ 5 ಗಂಟೆಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.