ಕೋಲಾರ: ದೇವರ ಹಾಗೂ ಭಕ್ತಾಧಿಗಳ ಸೇವೆಯಲ್ಲಿ ಪ್ರತಿಫಲಾಫೇಕ್ಷೆ ಇಲ್ಲದೆ ಮಾಡುವ ಕಾರ್ಯದಿಂದ ಆತ್ಮತೃಪ್ತಿ ದೊರಕುತ್ತದೆ ಎಂದು ಸಮಾಜ ಸೇವಕ ಶ್ರೀನಾಥ್
Kolar, Kolar | Nov 19, 2025 ದೇವರ ಹಾಗೂ ಭಕ್ತಾಧಿಗಳ ಸೇವೆಯಲ್ಲಿ ಪ್ರತಿಫಲಾಫೇಕ್ಷೆ ಇಲ್ಲದೆ ಮಾಡುವ ಕಾರ್ಯದಿಂದ ಆತ್ಮತೃಪ್ತಿ ದೊರಕುತ್ತದೆ ಎಂದು ಸಮಾಜ ಸೇವಕ ಜೆಡಿಎಸ್ ಮುಖಂಡ ಸಿ.ಎಂ.ಆರ್ ಶ್ರೀನಾಥ್ ಕೋಲಾರ ನಗರದ ಎ.ಪಿ.ಎಂ.ಸಿಯ ಸಿ.ಎಂ.ಆರ್. ಮಂಡಿಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರತಿ ವರ್ಷದಂತೆ ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಲಕ್ಷ ದೀಪೋತ್ಸವದ ಪ್ರಯುಕ್ತ, ಭಕ್ತಾಧಿಗಳಿಂದ ೨೦ನೇ ವರ್ಷದ ಸೇವಾ ಕಾಂಕರ್ಯದ ಅಂಗವಾಗಿ ೧ ಲಾರಿ ಲೋಡ್ನಷ್ಟು ಧವಸ-ಧಾನ್ಯ ಹಾಗೂ ಹಣ್ಣು ತರಕಾರಿಗಳನ್ನು ಕೊಂಡೊಯ್ಯವ ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು.