ಯಲ್ಲಾಪುರ: ಬೇಡ್ತಿ ಹುಲಿಯಪ್ಪನಿಗೆ ವಿಶೇಷ ಪೂಜೆ,ನದಿ ತಿರುವು ಯೋಜನೆ ಯಿಂದ ಕಾಪಾಡುವಂತೆ ಗ್ರಾಮಸ್ಥರ ಮೊರೆ
ಯಲ್ಲಾಪುರ : ತಾಲೂಕಿನ ಬೇಡ್ತಿ ನದಿ ತಟದಲ್ಲಿರುವ ಹೊಳೆಹುಲಿಯಪ್ಪನಲ್ಲಿಗೆ ದೀಪಾವಳಿಯ ನರಕ ಚತುರ್ದಶಿಯ ದಿನವಾದ ಸೋಮವಾರ ಅಪಾರಸಂಖ್ಯೆಯಲ್ಲಿ ಭಕ್ತರುಗಳು ತೆರಳಿ ವಿಶೇಷವಾದ ತೆಂಗಿನಕಾಯಿಯ ವಾರ್ಷಿಕ ಹರಕೆ ಪೂಜೆಸಲ್ಲಿಸಿದರು.ನರಕಚತುರ್ಧಶಿಯಂದು ಸುತ್ತಮುತ್ತಲಿನ ಹಳ್ಳಿಯ ಜನರು ದನಬಾಲಕಾಯಿ ನೀಡುವ ಪಧ್ದತಿ ಅನಾದಿಕಾಲದಿಂದಲೂ ನಡೆದುಕೊಂಡು ಬಂದಿದೆ. ಆದರೆ ಈ ಬಾರಿ ವಿಶೇಷ ವಾಗಿ ಗ್ರಾಮಸ್ಥರು ಬೇಡ್ತಿ ತಿರುವು ಯೋಜನೆ ಜಾರಿಯಾಗದಂತೆ ಕಾಪಾಡು ಎಂದು ಹುಲಿಯಪ್ಪ ದೇವರಲ್ಲಿ ಮೊರೆಹೋಗಿದ್ದಾರೆ.