ಚಿತ್ರದುರ್ಗ:-ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಕಂಚೀಪುರ ಗ್ರಾಮದಲ್ಲಿ ಅರಣ್ಯದೊಳಗೆ ಹೋಗಿ ಮೊಲ ಬೇಟೆಯಾಡಿ, ಆ ಮೊಲದ ಕಿವಿಗೆ ಓಲೆ ಹಾಕಿ ಕಾಡಿಗೆ ಬಿಡುವ ಮೂಲಕ ಸಂಪ್ರದಾಯಿಕವಾಗಿ ಪ್ರತಿ ವರ್ಷವು ಕೂಡ ವಿಶೇಷವಾಗಿ ಸಂಕ್ರಾಂತಿ ಹಬ್ಬ ಆಚರಿಸಲಾಯಿತು. ಸಾಮಾನ್ಯವಾಗಿ ಸಂಕ್ರಾಂತಿ ಹಬ್ಬದಲ್ಲಿ ಮನೆಯಲ್ಲಿ ಸಿಹಿ ಪದಾರ್ಥ ಸೇವಿಸಿ, ಪೂಜೆ, ಬಂಧು ಬಳಗದವರೊಂದಿಗೆ ಪುಣ್ಯ ಸ್ಥಳಗಳಿಗೆ ತೆರಳುವುದು, ಎಳ್ಳು– ಬೆಲ್ಲ ವಿನಿಮಯ ಸರ್ವೇ ಸಾಮಾನ್ಯ. ಆದರೆ, ಕಂಚೀಪುರ ಗ್ರಾಮದಲ್ಲಿ ಮೊಲ ಭೇಟಿಯಾಡಿ, ನಂತರ ಕಂಚಿವರದರಾಜ ಸ್ವಾಮಿಯ ಉತ್ಸವ ಮಾಡುವ ಮೂಲಕ ವಿಶೇಷ ರೀತಿಯಲ್ಲಿ ಸಂಕ್ರಾಂತಿ ಆಚರಿಸಲಾಗುವುದು.