ಚಿತ್ರದುರ್ಗ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ತಾಲ್ಲೂಕಿನ 320 ಆಶಾ ಕಾರ್ಯಕರ್ತೆಯರಿಗೆ ಟಿಹೆಚ್ಒ ಡಾ.ಬಿ.ವಿ.ಗಿರೀಶ್ ಅವರು ಉಚಿತ ಸಿಯುಜಿ ಸಿಮ್ ಕಾರ್ಡ್ ವಿತರಣೆ ಮಾಡಿದರು. ಈ ವೇಳೆ ಮಾತನಾಡಿದ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್, ಎಲ್ಲರಿಗೂ ಆರೋಗ್ಯ ಎಲ್ಲೆಡೆ ಆರೋಗ್ಯ, ಗುಣಮಟ್ಟದ ಹೆರಿಗೆ ಸೇವಾ ಸೌಲಭ್ಯ ಒದಗಿಸಲು ಸಾರ್ವಜನಿಕ ಆರೋಗ್ಯ ಕಾಪಾಡಲು, ವಲಯಗಳಲ್ಲಿ ಆಶಾ ಕಾರ್ಯಕರ್ತೆಯರು ಇಲಾಖೆ ಸಿಬ್ಬಂದಿಯವರಿಗೆ ಮೇಲ್ವಿಚಾರಣಾ ಅಧಿಕಾರಿಗಳಿಗೆ, ವೈದ್ಯರಿಗೆ ಪರಸ್ಪರ ಉಚಿತ ಕರೆಗಳನ್ನು ಮಾಡಲು ಮತ್ತು ಎಸ್ಎಂಎಸ್ ಕಳುಹಿಸಲು ಸಿಯುಜಿ ಸಿಮ್ಗಳು ತುಂಬಾ ಉಪಯುಕ್ತ ಎಂದರು.