ಕಲಬುರಗಿ: ತಾಡತೆಗನೂರುನಲ್ಲಿ ಮಹಿಳೆ ಸಾಲ ಬಾದೆಯಿಂದ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ
ಕಲಬುರಗಿ ತಾಲ್ಲೂಕಿನ ತಾಡತೆಗನೂರು ಗ್ರಾಮದ ಶರಣಮ್ಮ (70) ಎಂಬವರು ಕೃಷಿ ಸಾಲದ ಬಾಧೆಯಿಂದ ಕ್ರೀಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಸುಮಾರು 8 ಲಕ್ಷ ರೂ. ಸಾಲದ ಒತ್ತಡ ಹಾಗೂ ಬೆಳೆ ನಷ್ಟದಿಂದ ಮಾನಸಿಕವಾಗಿ ತೊಂದರೆಗೊಂಡಿದ್ದ ಶರಣಮ್ಮ ಅವರು ಮನೆಯಲ್ಲೇ ವಿಷ ಸೇವಿಸಿ ಮೃತಪಟ್ಟಿದ್ದಾರೆ. ಫರಹತಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾಗಿ ಶೆನಿವಾರ 9 ಗಂಟೆಗೆ ಪೊಲೀಸರು ಮಾಹಿತಿ ನೀಡಿದ್ದಾರೆ..