ಶಿರಸಿ:ಕೆನರಾ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾಗಿ, ಕರಾವಳಿ ಕರ್ನಾಟಕದ ಪ್ರಮುಖ ಪ್ರದೇಶಗಳಾದ, ಮಡಗಾಂವ್,ಕಾರವಾರ, ಉಡುಪಿ, ಮತ್ತು ಮಂಗಳೂರನ್ನು ಬೆಂಗಳೂರಿನೊಂದಿಗೆ ಸಂಪರ್ಕಿಸಲು ವಂದೇ ಭಾರತ್ ಎಕ್ಸ್ಪ್ರೆಸ್ ಸೇವೆಯನ್ನು ಪರಿಚಯಿಸುವಂತೆ ಕೋರಿ ಮನವಿ ನೀಡಲಾಗಿದೆ. ಈ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಸಚಿವರು ಸಕಲೇಶಪುರ ಘಾಟ್ ನಡುವೆ ವಿದ್ಯುದ್ದಿಕರಣ ಕಾಮಗಾರಿ ಪರೀಕ್ಷಾರ್ಥ ಹಂತದಲ್ಲಿದ್ದು, ಪರೀಕ್ಷೆ ಪೂರ್ಣಗೊಂಡ ತಕ್ಷಣ ಈ ಸೇವೆಯನ್ನು ಪ್ರಾರಂಭಿಸುವ ಭರವಸೆಯನ್ನ ನೀಡಿದ್ದಾರೆ ಎಂದು ತಿಳಿಸಿದ್ದಾರೆ. *ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದರು ಉತ್ತರ ಕನ್ನಡ*.