ಸಿಂದಗಿ: ಬಂದಾಳದಲ್ಲಿ ಪುರಾಣ ಪ್ರವಚನ ಸಮಾರಂಭ, ಶಾಸಕ ಅಶೋಕ ಮನಗೂಳಿ ಭಾಗಿ
ತಾಲ್ಲೂಕಿನ ಬಂದಾಳದಲ್ಲಿ ಶ್ರೀ ಹುಡೇದ ಲಕ್ಷ್ಮೀ ದೇವಿಯ ಜಾತ್ರೆ ಅಂಗವಾಗಿ ಶುಕ್ರವಾರ ನಡೆದ ಪುರಾಣ ಪ್ರವಚನ ಸಮಾರಂಭದಲ್ಲಿ ಶಾಸಕ ಅಶೋಕ ಮನಗೂಳಿ ಭಾಗಿಯಾಗಿದ್ದರು. ಸಿಂದಗಿಯ ಸಾರಂಗಮಠ-ಗಚ್ಚಿನಮಠದ ಗುರುಕುಲ ಭಾಸ್ಕರ ಪಂಚಾಚಾರ್ಯ ಶ್ರೀ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಕನ್ನೊಳ್ಳಿಯ ಶ್ರೀ ಸಿದ್ದಲಿಂಗ ಶಿವಾಚಾರ್ಯರು ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಶಾಸಕ ಅಶೋಕ ಮನಗೂಳಿ ಸನ್ಮಾನೋತ್ತರವಾಗಿ ಮಾತನಾಡಿದರು. ಗ್ರಾಮದ ಹಿರಿಯರು ವೇದಿಕೆ ಮೇಲೆ ಇದ್ದರು.