ಬಾಗೇಪಲ್ಲಿ: ದಲಿತರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ,ಚೇಳೂರಿನಲ್ಲಿ ದಸಂಸ ರಾಜ್ಯ ಮುಖಂಡ ರಾಜಾಕಾಂತ್
ಬಾಗೇಪಲ್ಲಿ ತಾಲೂಕಿನಿಂದ ಬೇರ್ಪಟ್ಟ ನೂತನ ಚೇಳುರು ತಾಲೂಕು ಕೇಂದ್ರದಲ್ಲಿ ಇಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಮುಖಂಡ ರಾಜಾಕಾಂತ್ ರವರ ನೇತೃತ್ವದಲ್ಲಿ ಮುಖಂಡರ ಸಭೆಯನ್ನು ಏರ್ಪಡಿಸಲಾಗಿತ್ತು. ಈ ಸಭೆಯ ನಂತರ ಮಾತನಾಡಿದ ರಾಜಾಕಾಂತ್ ರವರು ಜಿಲ್ಲೆಯಾದ್ಯಂತ ಹಲವಾರು ದಲಿತರ ಬೇಡಿಕೆಗಳನ್ನು ಇಟ್ಟುಕೊಂಡು ಈ ಹಿಂದೆ ಪ್ರತಿಭಟನೆ ನಡೆಸಿದ್ದು, ಇದಕ್ಕೆ ಸಂಬಂಧಪಟ್ಟಂತೆ ಜಿಲ್ಲಾಧಿಕಾರಿಯವರು ಸ್ಪಂದಿಸಿ ಅವನ್ನು ಇತ್ಯರ್ಥ ಪಡಿಸಲು ಸಂಬಂಧಪಟ್ಟ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು. ಆದರೆ ಇನ್ನೂ ಬಹಳಷ್ಟು ಕಡೆ ಅಧಿಕಾರಿಗಳು ನಿರ್ಲಕ್ಷ ವಹಿಸುತ್ತಿದ್ದು, ದಲಿತರ ಸಮಸ್ಯೆಗಳನ್ನ ಪರಿಹರಿಸಿಲ್ಲ ಹಾಗಾಗಿ ಮತ್ತೆ ಸಂಘಟನಾತ್ಮಕ ಹೋರಾಟಗಳು ಅಗತ್ಯವಿದೆ ಎಂದು ತಿಳಿಸಿದರು.