ದಾವಣಗೆರೆ: ಚನ್ನಗಿರಿ : ತಾಲೂಕಿನ ನಾಗರಸನಹಳ್ಳಿ ಗ್ರಾಮದಲ್ಲಿ ಅಡಕೆ, ಕಬ್ಬು ಬೆಂಕಿಗಾಹುತಿ
ಬೆಂಕಿಗೆ 5 ಎಕರೆ ಕಬ್ಬಿನ ಬೆಳೆ, 400 ಅಡಕೆ ಮರ ಆಹುತಿ ಚನ್ನಗಿರಿ : ಸೊಗಸಾಗಿ ಬೆಳೆದ ಅಡಕೆ, ಕಬ್ಬಿನ ಗದ್ದೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು 5 ಎಕರೆ ಕೂಳೆ ಕಬ್ಬು ಹಾಗೂ 400ಕ್ಕೂ ಹೆಚ್ಚು ಅಡಕೆ ಮರಗಳು ಬೆಂಕಿಗಾಹುತಿಯಾಗಿರುವ ಘಟನೆ ದಾವಣಗೆರೆ ತಾಲೂಕಿನ ನಾಗರಸನಹಳ್ಳಿ ಗ್ರಾಮದಲ್ಲಿ ನಡೆದಿದೆ. ಶ್ರೀ ವೀರಭದ್ರೇಶ್ವರಸ್ವಾಮಿ ದೇವಸ್ಥಾನಕ್ಕೆ ಸೇರಿದ್ದ 5 ಎಕರೆ ಕಬ್ಬಿನ ಬೆಳೆ ಮತ್ತು ಮಿಟ್ಲಕಟ್ಟೆ ಚಂದ್ರಪ್ಪ ಎಂಬುವರಿಗೆ ಸೇರಿದ ಮೂರುವರೆ ಎಕರೆಯಲ್ಲಿನ 9 ವರ್ಷದ ಫಲ ಕೊಡುತ್ತಿದ್ದ ಅಡಕೆ ಮರಗಳು ಸುಟ್ಟಿವೆ.