ತುರುವೇಕೆರೆ: ನೆಟ್ಟೆಕೆರೆ ಬಳಿ ಹೇಮಾವತಿ ನಾಲೆಯಲ್ಲಿ ಗಂಡಸಿನ ಶವ ಪತ್ತೆ
ತುರುವೇಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಿ.ಎಸ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ನೆಟ್ಟೆಕೆರೆ ಸಮೀಪ ಕುಣಿಗಲ್ ಕಡೆಗೆ ಹೋಗುವ ಹೇಮಾವತಿ ನಾಲೆಯಲ್ಲಿ ಸುಮಾರು 40-45 ವರ್ಷದ ಅಪರಿಚಿತ ಪುರುಷನ ಮೃತದೇಹ ಪತ್ತೆಯಾಗಿದೆ. ಮೃತದೇಹ 150cm ಎತ್ತರವಿದ್ದು, ಚರ್ಮ ಸುಲಿದು, ಹೊಟ್ಟೆ, ಕುತ್ತಿಗೆ, ಕೈಗಳಲ್ಲಿ ನೀರು ಗುಳ್ಳೆಗಳಿದ್ದು, ಮುಖ ಗುರುತು ಸಿಗದಂತೆ ಕಪ್ಪಾಗಿ, ಅಸ್ಪಷ್ಟವಾಗಿ ಕಾಣುತ್ತಿದೆ. ಮೃತನ ಗುರುತು ಪತ್ತೆಯಾಗಿಲ್ಲ.