ಮಳವಳ್ಳಿ: ತಾಲ್ಲೂಕಿನ ದೊಡ್ಡಬೂವಳ್ಳಿ ಗ್ರಾಮದಲ್ಲಿ ಗ್ರಾಮದೇವತೆ ಹಬ್ಬದಂತೆ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭ
ಮಳವಳ್ಳಿ : ತಾಲೂಕಿನ ದೊಡ್ಡ ಬೂವಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ 70ನೇ ಕನ್ನಡ ರಾಜ್ಯೋತ್ಸವವನ್ನು ಶನಿವಾರ ಮಧ್ಯಾಹ್ನ 1.30ರ ಸಮಯದಲ್ಲಿ ಬಹು ವಿಜೃಂಭಣೆಯಿಂದ ಆಚರಿಸಲಾ ಯಿತು. ಮೊದಲಿಗೆ ತೆರೆದ ವಾಹನದಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರ ವನ್ನು ಗ್ರಾಮದ ಪ್ರಮುಖ ಬೀದಿ ಗಳಲ್ಲಿ ಅದ್ದೂರಿ ಮೆರವಣಿಗೆ ನಡೆಸಲಾಯಿತು. ವೀರಗಾಸೆ ಕುಣಿತ, ಪೂಜಾ ಕುಣಿತ ಸೇರಿ ಹಲವು ಜಾನಪದ ಕಲಾತಂಡಗಳ ಜೊತೆಗೆ ಕುಂಬ ಕಳಶ ಹೊತ್ತ ವಿದ್ಯಾರ್ಥಿನಿಯರು ಮೆರವಣಿಗೆ ಯಲ್ಲಿ ಸಾಗಿದರು. ನೂರಾರು ಮಂದಿ ಪೋಷಕರು ಗ್ರಾಮಸ್ಥರು ಪಾಲ್ಗೊಂಡಿದ್ದು ಇದರಿಂದಾಗಿ ಗ್ರಾಮದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು.