ಬೆಂಗಳೂರು ವಿಕಾಸಸೌಧದಲ್ಲಿ ಇಂದು ಸತೀಶ್ ಜಾರಕಿಹೋಳೆ ಅವರ ಅಧ್ಯಕ್ಷತೆಯಲ್ಲಿ ವಾಗ್ದಾರಿ–ರಿಬ್ಬನ್ಪಳ್ಳಿ ರಾಜ್ಯ ಹೆದ್ದಾರಿ–10ನ್ನು ಮಹಾರಾಷ್ಟ್ರ ಗಡಿಯಿಂದ ಆಳಂದ, ಕಲಬುರಗಿ, ಮಲೈಡ್, ಸೇಡಂ ಮಾರ್ಗವಾಗಿ ಆಂಧ್ರ ಪ್ರದೇಶ ಗಡಿಯವರೆಗೆ ನಾಲ್ಕು ಪಥದ ರಸ್ತೆಯಾಗಿ ಅಭಿವೃದ್ಧಿಪಡಿಸುವ ಕುರಿತು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಮಹತ್ವದ ಚರ್ಚೆ ನಡೆಯಿತು. ಈ ಯೋಜನೆಯಿಂದ ಉತ್ತರ ಕರ್ನಾಟಕದ ಸಂಪರ್ಕ ವ್ಯವಸ್ಥೆ ಮತ್ತಷ್ಟು ಬಲಪಡಿಸಿ, ವ್ಯಾಪಾರ–ವಾಣಿಜ್ಯ ಹಾಗೂ ಆರ್ಥಿಕ ಚಟುವಟಿಕೆಗಳಿಗೆ ಹೊಸ ಉತ್ತೇಜನ ದೊರೆಯಲಿದೆ. ಸಭೆಯಲ್ಲಿ ಮಾನ್ಯ ಸಚಿವರಾದ ಶ್ರೀ ಪ್ರಿಯಾಂಕ ಖರ್ಗೆ, ಹಿರಿಯ ಶಾಸಕರಾದ ಶ್ರೀ ಬಿ. ಆರ್. ಪಾಟೀಲ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.