ಶಿವಮೊಗ್ಗ: ಹೊಳಲೂರು ಗ್ರಾಮದಲ್ಲಿ ಅಡಿಕೆ ಕೋಯ್ಯುವಾಗ ವಿದ್ಯುತ್ ಸ್ಪರ್ಶಿಸಿ ಯುವಕ ಸಾವು
ಶಿವಮೊಗ್ಗ ತಾಲ್ಲೂಕಿನ ಹೊಳಲೂರು ಗ್ರಾಮದಲ್ಲಿ ಅಡಿಕೆ ಕೋಯ್ಯುವಾಗ ವಿದ್ಯುತ್ ಸ್ಪರ್ಶಿಸಿ ಯುವಕನೊಬ್ಬ ಮೃತ ಪಟ್ಟಿರುವ ಘಟನೆ ಬುಧವಾರ ಮಧ್ಯಾಹ್ನ 2 ಗಂಟೆಗೆ ನಡೆದಿದೆ. ಮೃತ ಪಟ್ಟಿರುವ ವ್ಯಕ್ತಿಯನ್ನು ಹರಮಘಟ್ಟದ ವೆಂಕಟೇಶ್ (30) ಎಂದು ಗುರುತಿಸಲಾಗಿದ್ದು, ಹೊಳಲೂರಿನಲ್ಲಿ ಓಂಕಾರಪ್ಪ ಎಂಬುವರಿಗೆ ಸೇರಿದ್ದ ಅಡಿಕೆ ತೋಟದಲ್ಲಿ ಅಡಿಕೆ ಕೋಯ್ಯುವಾಗ ಅಡಿಕೆ ಗಣೆಗೆ ತೋಟದಲ್ಲಿ ಹಾದು ಹೋಗಿದ್ದ 11 ಕೆವಿ. ವಿದ್ಯುತ್ ತಂತಿಗೆ ಸ್ಪರ್ಶಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಪ್ರಕರಣ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ.