ಔರಾದ್: ಆತ್ಮನಿರ್ಭರ್ ಭಾರತ ಸಂಕಲ್ಪ ಅಭಿಯಾನ ಹಿನ್ನೆಲೆ ನಾಗನಪಲ್ಲಿಯಲ್ಲಿ ಮನೆ ಮನೆಗೆ ಸ್ವದೇಶಿ ಸ್ಟಿಕ್ಕರ್ ಅಂಟಿಸಿದ ಶಾಸಕ ಪ್ರಭು ಚೌಹಾಣ್
Aurad, Bidar | Nov 20, 2025 ಆತ್ಮ ನಿರ್ಭರ್ ಭಾರತ ಸಂಕಲ್ಪ ಅಭಿಯಾನ ಹಿನ್ನೆಲೆಯಲ್ಲಿ ಕ್ಷೇತ್ರದ ಶಾಸಕ ಪ್ರಭು ಚೌಹಾಣ್ ಅವರು ಗುರುವಾರ ಸಂಜೆ 5ಕ್ಕೆ ಔರಾದ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ನಾಗನಪಲ್ಲಿಯಲ್ಲಿ ಮನೆ ಮನೆಗೆ ತೆರಳಿ ಸ್ವದೇಶಿ ಸ್ಟಿಕರ್ ಅಂಟಿಸಿದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರು ಹಾಗೂ ಗ್ರಾಮಸ್ಥರು ಹಾಜರಿದ್ದರು.