ಯಲ್ಲಾಪುರ: ಕಾಳಮ್ಮನಗರದಲ್ಲಿ ಕೊಲೆಯಾದ ರಂಜಿತಾ ಬನ್ಸೋಡೆ ಮನೆಗೆ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ ಮುತಾಲಿಕ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದರು. ಇಂತಹ ಅಮಾನವೀಯ ಕೃತ್ಯ ನಡೆಯಬಾರದಿತ್ತು. ದುಃಖದಲ್ಲಿರುವ ಕುಟುಂಬಕ್ಕೆ ಹಿಂದು ಸಂಘಟನೆಗಳು ಸದಾ ಬೆಂಬಲವಾಗಿ ನಿಲ್ಲುತ್ತವೆ ಎಂದು ಧೈರ್ಯ ಹೇಳಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಮುತಾಲಿಕ, ಮತಕ್ಕಾಗಿ ಜಿಹಾದಿಗಳನ್ನು, ಕೊಲೆಗಡುಕರನ್ನು, ಗೋ ಹಂತಕರನ್ನು ಓಲೈಕೆ ಮಾಡುತ್ತಿರುವ ಕಾಂಗ್ರೆಸ್ ಗೆ ನಾಚಿಕೆ, ಮಾನ, ಮರ್ಯಾದೆ, ದೇಶಭಕ್ತಿ ಯಾವುದೂ ಇಲ್ಲ. ಮುಸ್ಲಿಮರ ರಾಕ್ಷಸೀ ಪ್ರವೃತ್ತಿ, ಅಮಾನವೀಯತೆಯೇ ಕಾಂಗ್ರೆಸಿನಲ್ಲಿರುವ ಹಿಂದುಗಳನ್ನೂ ನುಂಗಿ ಹಾಕಲಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.