ಹೊಸನಗರ: ಹೊಸನಗರದಲ್ಲಿ ತೆರೆದ ಬಾವಿಗೆ ಬಿದ್ದ ಹಸು ರಕ್ಷಣೆ
20 ಅಡಿ ಆಳದ ತೆರದ ಬಾವಿಗೆ ಬಿದ್ದ ಹಸುವನ್ನು ರಕ್ಷಣೆ ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆ ಹೊಸನಗರ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಹಿಂಭಾಗದಲ್ಲಿದ್ದ ಬಾವಿಗೆ ಹಸು ಆಯ ತಪ್ಪಿ ಬಿದ್ದಿತ್ತು. ಬಾವಿಗೆ ಬಿದ್ದ ಹಸುವನ್ನು ಅಗ್ನಿಶಾಮಕದಳ ಸಿಬ್ಬಂದಿ ಶುಕ್ರವಾರ ಸಂಜೆ 5 ಗಂಟೆಗೆ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಗಳಾದ ಆನಂದಪ್ಪ, ಸುರೇಶ್ ಪಾಟೀಲ್, ಭೀಷ್ಮಾಚಾರಿ ಸೇರಿ ಹಲವರು ಹಸುವನ್ನ ರಕ್ಷಣೆ ಮಾಡಿದ್ದಾರೆ.