ಮೊಳಕಾಲ್ಮುರು:-ನೀರಾವರಿ ಸೌಲಭ್ಯ ವಿಷಯದಲ್ಲಿ ತಾಲ್ಲೂಕು ತೀವು ನಿರ್ಲಕ್ಷ್ಯಕ್ಕೆ ತುತ್ತಾಗಿದ್ದು ಇನ್ನಾದರೂ ಹೋರಾಟಕ್ಕೆ ಚುರುಕು ನೀಡದಿದ್ದಲ್ಲಿ ಮುಂದಿನ ಪೀಳಿಗೆಯು ನಮಗೆ ಹಿಡಿಶಾಪ ಹಾಕುವುದು ಖಚಿತ ಎಂದು ರಾಜ್ಯ ರೈತಸಂಘ ಮತ್ತು ಹಸಿರುಸೇನೆ ರಾಜ್ಯ ಕಾರ್ಯಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರಡ್ಡಿ ಹೇಳಿದರು. ಮಂಕಿಮಲೆ ಸಿದ್ಧೇಶ್ವರ ಸಮುದಾಯ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ತಾಲ್ಲೂಕು ನೀರಾವರಿ ಹೋರಾಟ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.