ಗೊರ್ಲತ್ತು ಬಳಿ ಮೀನು ಹಿಡಿಯಲು ಹೋಗಿದ್ದ ಯುವಕ ನೀರುಪಾಲಾದ ಘಟನೆಗೆ ಸಂಬಂಧಿಸಿದಂತೆ, ನೀರು ಪಾಲಾದ ಯುವಕ ಧನುಷ್ (21)ಶವವಾಗಿ ಪತ್ತೆಯಾಗಿದ್ದಾನೆ. ಯುವಕನ ಮೃತದೇಹವನ್ನ ಅಗ್ನಿ ಶಾಮಕ ದಳ ಸಿಬ್ಬಂದಿಗಳು ಹೊರ ತೆಗೆದಿದ್ದಾರೆ. ಮೀನು ಹಿಡಿಯಲು ವೇದಾವತಿ ನದಿಗೆ ಇಳಿದಿದ್ದರು. ಈ ವೇಳೆ ಏಕಾಏಕಿ ತೆಪ್ಪ ಮುಗುಚಿತ್ತು. ಧನುಷ್ ಮೃತದೇಹ ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಪೋಸ್ಟ್ ಮಾರ್ಟೆಮ್ ಗೆ ಮೃತದೇಹವನ್ನ ಚಳ್ಳಕೆರೆ ತಾಲೂಕಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.