ಬಳ್ಳಾರಿ: ಬಳ್ಳಾರಿ-ಹೊಸಪೇಟೆ ನಡುವಿನ ರಾಷ್ಟ್ರೀಯ ಹೆದ್ದಾರಿ 63ರ ಕಾಮಗಾರಿ ಶೀಘ್ರ ಮುಕ್ತಾಯಗೊಳಿಸಿ: ನಗರದಲ್ಲಿ ಶ್ರೀನಿವಾಸರೆಡ್ಡಿ ಒತ್ತಾಯ
ಬಳ್ಳಾರಿ:ಯೋಜನೆಯಂತೆ ನಡೆದಿದ್ದರೆ ಹೊಸಪೇಟೆ–ಬಳ್ಳಾರಿ ನಡುವಿನ ಹೆದ್ದಾರಿ 63ರ ಚತುಷ್ಪಥ ರಸ್ತೆ ಕಾಮಗಾರಿ ಮುಗಿದು 5 ವರ್ಷಗಳಾಗುತ್ತಿತ್ತು. ಆದರೆ ಗುತ್ತಿಗೆ ಪಡೆದ ಕಂಪನಿಯ ನಿರ್ಲಕ್ಷ್ಯದಿಂದಾಗಿ ಹೆದ್ದಾರಿ ಕಾಮಗಾರಿ ಹಲವು ವರ್ಷಗಳು ಕಳೆದು ಹೋದರೂ ಕಾಮಗಾರಿ ನಿಧಾನಗತಿಯಲ್ಲೇ ನಡೆಯುತ್ತಿದ್ದು, ವಾಹನ ಪ್ರಯಾಣಿಕರು, ಜನತೆ ದಿನಕ್ಕೊಂದು ಸಮಸ್ಯೆಗಳನ್ನು ಎದುರಿಸಿ ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ ಎಂದುಕರ್ನಾಟಕಕ್ಕೆ ರಾಷ್ಟ್ರ ಸಮಿತಿ ಪಕ್ಷದ ಮುಖಂಡ ಅಲ್ಲಿಪುರ ಶ್ರೀನಿವಾಸರೆಡ್ಡಿ ದೂರಿದ್ದಾರೆ. ಬಳ್ಳಾರಿ ನಗರದಲ್ಲಿ ಬುಧುವಾರ ಬೆಳಿಗ್ಗೆ ಮಾತನಾಡಿದ ಅವರು ಹೊಸಪೇಟೆಯಿಂದ ಬಳ್ಳಾರಿಗೆ ಕೇವಲ 45 ನಿಮಿಷಗಳಲ್ಲಿ ಕ್ರಮಿಸಬಹುದಿತ್ತು. ಆದರೆ, ಈಗಲೂ ಬಳ್ಳಾರಿಗೆ ಕ್ರಮಿಸಲು ಎರಡು ಗಂಟೆ ಸಮಯ ಬೇಕು.