ಕುಮಟಾ ಗೋಕರ್ಣದ ಕುಡ್ಲೆ ಸಮುದ್ರ ತೀರದಲ್ಲಿ ಅಲೆಗಳ ಅಬ್ಬರಕ್ಕೆ ಸಿಲುಕಿದ್ದ ಕಝಾಕಿಸ್ತಾನದ ಮಹಿಳೆಯನ್ನುಲೈಫ್ ಗಾರ್ಡ್ ಸಿಬ್ಬಂದಿಗಳು ರಕ್ಷಿಸಿದ್ದಾರೆ. ಕುಡ್ಲೆ ತೀರದಲ್ಲಿ ಕಝಾಕಿಸ್ತಾನದ ಮಹಿಳೆಯೊಬ್ಬಳು ಸಮುದ್ರಕ್ಕಿಳಿದು ಈಜುತ್ತಿದ್ದಳು. ಈ ವೇಳೆ ಅಬ್ಬರದ ಅಲೆಗಳಿಗೆ ಸಿಲುಕಿ ಆಕೆ ಸಮುದ್ರದ ಕಡೆಗೆ ಸೆಳೆದೊಯ್ದಳು. ಅಲ್ಲಿಯೇ ಕಾರ್ಯ ನಿರ್ವಹಣೆ ಮಾಡುತ್ತಿದ್ದ ಸ್ಥಳೀಯ ಲೈಫ್ ಗಾರ್ಡ್ ಸಿಬ್ಬಂದಿಗಳಾದ ಮಂಜುನಾಥ್ ಹರಿಕಂತ್ರ, ಗಿರೀಶ್ ಗೌಡ, ಲಕ್ಷ್ಮೀಕಾಂತ ಹರಿಕಂತ್ರ ಅವರುಗಳು ಅಬ್ಬರದ ಅಲೆಗಳ; ನಡುವೆ ಹರಸಾಹಸ ಪಟ್ಟು ಕಝಾಕಿಸ್ತಾನದ ಮಹಿಳೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.