ಬೆಂಗಳೂರು ದಕ್ಷಿಣ: ವಯೋಸಹಜ ಅನಾರೋಗ್ಯದಿಂದ ಖ್ಯಾತ ಸಾಹಿತಿ ಎಸ್ ಎಲ್ ಭೈರಪ್ಪ ನಿಧನ
ನಾಡು ಕಂಡ ಖ್ಯಾತ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ವಯೋಸಹಜ ಅನಾರೋಗ್ಯದಿಂದ ಬುಧವಾರ ನಿಧನರಾಗಿದ್ದಾರೆ. ೯೪ ವರ್ಷದ ಭೈರಪ್ಪ, ಬೆಂಗಳೂರಿನ ರಾಜ ರಾಜೇಶ್ವರಿ ನಗರದ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ಒಂದು ವಾರದಿಂದ ಜ್ವರದಿಂದ ಬಳಲುತ್ತಿದ್ದರು. ಆದರೆ, ಚಿಕಿತ್ಸೆ ಫಲ ನೀಡದೇ, ಇದೀಗ ಇಹಲೋಕ ತ್ಯಜಿಸಿದ್ದಾರೆ. ಕಳೆದ ಕೆಲ ತಿಂಗಳಿಂದ ಮರೆವಿನ ಕಾಯಿಲೆಯೂ ಭೈರಪ್ಪ ಅವರಲ್ಲಿ ಕಾಣಿಸಿಕೊಂಡಿತ್ತು. ಗೃಹಭಂಗ, ವಂಶವೃಕ್ಷ, ಪರ್ವ, ನಾಯಿ ನೆರಳು, ಆವರಣ, ಉತ್ತರಕಾಂಡ ಸೇರಿ ಸಾಕಷ್ಟು ಕಾದಂಬರಿಗಳನ್ನು ಬರೆದಿದ್ದಾರೆ.