ಶಿರಸಿ: ಗೋಣೆಸರ ಹೊಂಡದಲ್ಲಿ ಬಿದ್ದಿದ್ದ ವ್ಯಕ್ತಿ ಯ ಶವ ಪತ್ತೆ
ಶಿರಸಿ : ತಾಲೂಕಿನ ಗೋಣೆಸರದ ಹೊಂಡದಲ್ಲಿ ಬಿದಿದ್ದ ಸುಬ್ಬ ದೇವು ಗೌಡನ ಮೃತ ದೇಹವನ್ನು ಶೋಧ ಕಾರ್ಯ ನಡೆಸಿ ಹೊಂಡದಿಂದ ಹೊರ ತೆಗೆಯಲು ಈಜು ತಜ್ಷ ಗೋಪಾಲ ಗೌಡಾ ಮತ್ತು ಅವರ ನೇತೃತ್ವದ ಶ್ರೀ ಮಾರಿಕಾಂಬಾ ಲೈಫ್ ಗಾರ್ಡ ತಂಡ ಯಶಸ್ವಿಯಾಗಿದೆ. ಈ ಒಂದು ಶೋಧ ಕಾರ್ಯದಲ್ಲಿ ಶ್ರೀ ಮಾರಿಕಾಂಬಾ ಲೈಫಗಾರ್ಡ್ ತಂಡದ ಮುಖ್ಯಸ್ಥ ಗೋಪಾಲ್ ಗೌಡ,ದಿವಾಕರ್ ಹುಲೇಕಲ್ , ಪ್ರದೀಪ್ ಎಸಳೆ,ತಿರುಮಲ ,ಹರ್ಷ ಮಡಿವಾಳ ಪಾಲ್ಗೊಂಡಿದ್ದರು. ಇವರಿಗೆ ಗ್ರಾಮೀಣ ಠಾಣೆಯ ಪಿಎಸ್ಐ ಅಶೋಕ ರಾಠೋಡ ಮತ್ತು ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಸಹಕಾರ ನೀಡಿದ್ದಾರೆ