ಪೂರ್ವ ನಗರ ಪಾಲಿಕೆಯಲ್ಲಿನ ಪ್ರಮುಖ ಜಂಕ್ಷನ್ ಗಳಲ್ಲಿ ಸುಧಾರಣೆ, ಪಾರ್ಕಿಂಗ್ ಪ್ರದೇಶಗಳ ಗುರುತಿಸುವಿಕೆ, ಅನಧಿಕೃತ ಕಟ್ಟಡಗಳ ತೆರವು ಕಾರ್ಯಪಡೆ, ಟಿ.ಡಿ.ಆರ್ ಮತ್ತು ಇಂಜಿನಿಯರಿಂಗ್ ವಿಭಾಗಗಳ ನಡುವೆ ಸಮನ್ವಯಕ್ಕೆ ಸಂಬಂಧಿಸಿದಂತೆ ಪೂರ್ವ ನಗರ ಪಾಲಿಕೆ ಆಯುಕ್ತರಾದ ಡಿ.ಎಸ್.ರಮೇಶ್ ರವರ ಅಧ್ಯಕ್ಷತೆಯಲ್ಲಿ ಮಂಗಳವಾರ ಸಂಜೆ 6 ಗಂಟೆ ಸುಮಾರಿಗೆ ಪಾಲಿಕೆಯಲ್ಲಿ ಸಭೆಯನ್ನು ನಡೆಸಲಾಗಿದ್ದು, ಪ್ರತಿಯೊಂದು ವಿಭಾಗದಲ್ಲೂ ಪ್ರಮುಖ ಜಂಕ್ಷನ್ಗಳನ್ನು ತುರ್ತಾಗಿ ಗುರುತಿಸುವ ಮೂಲಕ, ಜಂಕ್ಷನ್ಗಳ ಸುತ್ತಮುತ್ತಲಿನ 150 ಮೀ. ವ್ಯಾಪ್ತಿಯೊಳಗೆ ಪಾದಚಾರಿ ಮಾರ್ಗ ಒತ್ತುವರಿ ತೆರವು, ಪಾದಚಾರಿ ಮಾರ್ಗದಲ್ಲಿ ಏರಿಳಿತ ಸರಿಪಡಿಸುವುದು, ತೀವ್ರ ಸ್ವಚ್ಛತಾ ಕಾರ್ಯದ ಮೂಲಕ ಬ್ಲಾಕ್ ಸ್ಪಾಟ್ ನಿವಾರಣೆ,