ಬೇಲೂರು: ಬಿಕ್ಕೋಡಿನ ಹಾರ್ಡ್ವೇರ್ ಅಂಗಡಿಯವೊಂದಕ್ಕೆ ಆಕಸ್ಮಿಕ ಬೆಂಕಿ ಲಕ್ಷಾಂತರ ಮೌಲ್ಯದ ಎಲೆಕ್ಟ್ರಿಕಲ್ ವಸ್ತುಗಳು ಬಸ್ಮ
Belur, Hassan | Oct 3, 2025 ಬೇಲೂರು : ಬೇಲೂರು ತಾಲೂಕಿನ ಬಿಕ್ಕೋಡು ಪಟ್ಟಣದ ಮುಖ್ಯ ರಸ್ತೆಯಲ್ಲಿ ಇರುವ ರಂಗಸ್ವಾಮಿ ಮಾಲೀಕತ್ವದ ಬಾಲಾಜಿ ಹಾರ್ಡ್ ವೇರ್ ಅಂಗಡಿಗೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಎಲೆಕ್ಟ್ರಿಕಲ್, ಹಾರ್ಡವೇರ್ ಹಾಗೂ ಇತರೆ ಕೃಷಿ ಸಂಬಂಧಿತ ಪರಿಕರಗಳ ಸುಟ್ಟು ಕರಕಲಾಗಿರುವ ಘಟನೆ ವರದಿಯಾಗಿದೆ.ಕಳೆದ ರಾತ್ರಿ ಸುಮಾರು 8ರ ವೇಳೆಯಲ್ಲಿ ವಿಜಯದಶಮಿ ಹಬ್ಬದ ಪ್ರಯುಕ್ತ ಮಾಲೀಕರಾದ ರಂಗಸ್ವಾಮಿಯವರು ಬೇಗನೇ ಅಂಗಡಿಯನ್ನ ಮುಚ್ಚಿ ಮನೆಗೆ ತೆರಳಿದ್ದರು, ನಂತರ ಸುಮಾರು 8.30 ಸಮಯದಲ್ಲಿ ಅಂಗಡಿಯ ಒಳಗಿನಿಂದ ದಟ್ಟ ಹೋಗೆ ಕಾಣಿಸಿಕೊಂಡದ್ದನ್ನು ಗಮನಿಸಿದ ನೆರೆಹೊರೆಯ ಅಂಗಡಿಯ ಮಾಲೀಕರು ಹಾಗೂ ಸ್ಥಳೀಯರು ಕೂಡಲೇ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದಾರೆ.