ಬೆಂಗಳೂರು ಪೂರ್ವ: ಸಮೀಕ್ಷೆಯಲ್ಲಿ ನಾಯಿ ಕಚ್ಚಿ ಸಮೀಕ್ಷೇದಾರ ಆಸ್ಪತ್ರೆಗೆ ದಾಖಲು! ಸರ್ಕಾರದ ಸಮೀಕ್ಷೆ ಶಿಕ್ಷಕರಿಗೆ ಶಿಕ್ಷೆ! ಮಹದೇವಪುರದಲ್ಲಿ ನಾಯಿ ಕಾಟ
ಸಮೀಕ್ಷೆಗೆ ಹೋದಾಗ ಶಿಕ್ಷಕನಿಗೆ ನಾಯಿ ಕಚ್ಚಿರುವ ಘಟನೆ ಬೆಳಕಿಗೆ ಬಂದಿದೆ. ಮಹದೇವಪುರದಲ್ಲಿ ನಡೆದ ಘಟನೆ ಅಂತ ತಿಳಿದು ಬಂದಿದ್ದು ಗಾಯಗೊಂಡ ಟೀಚರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ದಿನದಿಂದ ದಿನಕ್ಕೆ ಈ ರೀತಿ ಪ್ರಕರಣ ಹೆಚ್ಚುತ್ತಿದ್ದು ಸಮೀಕ್ಷೇದಾರರಿಗೆ ಸುರಕ್ಷತೆಯ ಕೊರತೆ ಕಾಡುತ್ತಿದೆ.