ಬಳ್ಳಾರಿ: ಜೂ.11ರಿಂದ ಧಾರಾಕಾರ ಮಳೆ ಸಾಧ್ಯತೆ, ಜಿಲ್ಲೆಯಲ್ಲಿ ಯಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ
ಜೂನ್ 11ರಿಂದ ರಾಜ್ಯದಲ್ಲಿ ಮತ್ತೆ ಮಳೆ ಚುರುಕಾಗಲಿದೆ. ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನಿಗದಿತ ಅವಧಿಗಿಂತ ಮೊದಲೇ ರಾಜ್ಯಕ್ಕೆ ಕಾಲಿಟ್ಟು ಆರಂಭದಲ್ಲಿ ಭಾರಿ ಮಳೆ ಆಗುವ ಮುನ್ಸೂಚನೆ ನೀಡಿದ್ದ ಮುಂಗಾರು ಒಂದೇ ವಾರದಲ್ಲಿ ಕ್ಷೀಣಿಸಿದ್ದು, ರೈತರಲ್ಲಿ ಆತಂಕ ಮೂಡಿಸಿದೆ. ರಾಜ್ಯದಲ್ಲಿ ಸೋಮವಾರದಿಂದ ಮುಂಗಾರು ಮತ್ತೆ ಚುರುಕಾಗುವ ಸಾಧ್ಯತೆಯಿದ್ದು, ಜೂನ್ 11ರಿಂದ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜೂನ್ 11ರಂದು ಬಳ್ಳಾರಿ ಹಾಗೂ ವಿಜಯನಗರ ಅವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಜೂನ್ 12ರಂದು ಬಳ್ಳಾರಿ ಜಿಲ್ಲೆಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ರೈತರು ಹಾಗೂ ಸಾರ್ವಜನಿಕರು ಎಚ್ಚರದಿಂದ ಎಂದು ಹವಮಾನ ಇಲಾಖೆ ಭಾನುವಾರ ಸಂಜೆ ಆರು ಗಂಟೆಗೆ ತಿಳಿಸಿದೆ.