ಶಿರಸಿ: ಕೆಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿ ಚುನಾವಣೆ, 87ನಾಮಪತ್ರ ಸಲ್ಲಿಕೆ
ಶಿರಸಿ : ಜಿಲ್ಲೆಯ ಕೆಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿಗೆ ಅಕ್ಟೋಬರ 25 ರಂದು ಚುನಾವಣೆ ನಿಗದಿ ಪಡಿಸಲಾಗಿದ್ದು ಈ ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ಆಯ್ಕೆ ಬಯಸಿ 46 ಅಭ್ಯರ್ಥಿಗಳಿಂದ 87 ನಾಮಪತ್ರ ಸಲ್ಲಿಕೆಯಾಗಿದೆ. ಅ,18 ನಾಮಪತ್ರ ಪರಿಶೀಲನೆ ದಿನವಾಗಿದ್ದು ನಿಶ್ಚಿತವಾಗಿ ಎಷ್ಟು ಅಭ್ಯರ್ಥಿಗಳು ಕಣದಲ್ಲಿರುತ್ತಾರೆ ಎಂದು ತಿಳಿದು ಬರಲಿದೆ.