ಅಣ್ಣಿಗೇರಿ: ಅಣ್ಣಿಗೇರಿಯಲ್ಲಿ ಶಾಲಾ ಕೊಠಡಿ ಉದ್ಘಾಟಿಸಿದ ಶಾಸಕ ಎನ್.ಎಚ್.ಕೋನರಡ್ಡಿ
ಅಣ್ಣಿಗೇರಿ ನಗರದಲ್ಲಿರುವ ಸರ್ಕಾರಿ ಉರ್ದು ಪ್ರೌಡ ಶಾಲೆ(ಆರ್.ಎಂ.ಎಸ್.ಎ)ಯ ನೂತನವಾಗಿ ಅಂದಾಜು 80 ಲಕ್ಷರೂಗಳ ಸಮಗ್ರ ಶಿಕ್ಷಣ ಅಭಿವ್ರದ್ದಿ ಅನುದಾನದಲ್ಲಿ ಈ ಹಿಂದೆ ಶಾಸಕನಿದ್ದ ಅವಧಿಯಲ್ಲಿ ಗುದ್ದಿಲಿ ಪೂಜೆಯನ್ನು ಮಾಡಿದ್ದು ಇಂದು ಆ ಶಾಲೆಯ ಕೊಠಡಿಗಳನ್ನು ಉದ್ಘಾಟಿಸುವುದರ ಮೂಲಕ ಜೊತೆಗೆ ಹೆಚ್ಚುವರಿ ಕೊಠಡಿಗಳ ಅವಶ್ಯಕತೆ ಇದ್ದದನ್ನು ತಿಳಿದು ಮತ್ತೆ ಹೆಚ್ಚುವರಿ 70 ಲಕ್ಷ ರೂಗಳ ಅನುದಾನದಲ್ಲಿ ಹೆಚ್ಚುವರಿ ಕೊಠಡಿಗಳ ನಿರ್ಮಾಣದ ಕಾಮಗಾರಿಯನ್ನು ಶಾಸಕ ಎನ್.ಎಚ್.ಕೋನರಡ್ಡಿ ಅವರು ಭೂಮಿಪೂಜೆ ನೆರವೇರಿಸಿದರು. ನಮ್ಮ  ನವಲಗುಂದ ವಿಧಾನಸಭಾ ಮತಕ್ಷೇತ್ರದಲ್ಲಿರುವ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಡಶಾಲೆಗಳಿಗೆ ಅವಶ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ನಿರಂತರ ಪ್ರಯತ್ನಿಸಲಾಗುವುದು ಎಂದರು