ಹುಬ್ಬಳ್ಳಿ ನಗರ: ರಾಮನಗರದಲ್ಲಿ 1.03 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಪ್ರಕರಣ ದಾಖಲು
ಹುಬ್ಬಳ್ಳಿ: ಕಳ್ಳರು ಮನೆಯ ಕೀಲಿ ಮುರಿದು ಅಂದಾಜು 1.03 ಲಕ್ಷ ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿ ಸಾಮಗ್ರಿ, ನಗದು ಕಳಡ್ಠ ಮಾಡಿದ ಘಟನೆ ನಗರದ ಹೊರ ವಲಯದ ರಾಮನಗರದಲ್ಲಿ ನಡೆದಿದೆ.  ಶಿವಲಿಂಗಯ್ಯ ಎಂಬುವವರು ಕೆಲಸಕ್ಕೆ ಹೋಗಿ ಸಂಜೆ ಮನೆಗೆ ಬರುಷ್ಟರಲ್ಲಿ ಕಳ್ಳರು ಕೀಲಿ ಮುರಿದು, 15ಗ್ರಾಂ ಚಿನ್ನಾಭರಣ, 325ಗ್ರಾಂ ಬೆಳ್ಳಿ ಸಾಮಗ್ರಿ, 10 ಸಾವಿರ ರೂ. ನಗದು, ಒಂದು ಮೊಬೈಲ್ ಫೋನ್ ಕಳುವು ಮಾಡಿದ್ದಾರೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.