ವಿಶ್ವ ಕಮ್ಮಾರ ಸಮಾಜದ ಬೇಡಿಕೆ ಈಡೇರಿಸುವಂತೆ ವಿಶ್ವ ಕಮ್ಮಾರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ವಿಶ್ವ ಕಮ್ಮಾರ ಸಮಾಜಕ್ಕೆ ವಸತಿ ರಹಿತರಿಗೆ ಉಚಿತ ನಿವೇಶನ ನೀಡಿ ವಸತಿ ನಿರ್ಮಾಣಕ್ಕೆ ಅನುದಾನ ನೀಡಬೇಕು ಹಾಗೂ ನಿರುದ್ಯೋಗಿ ಯುವಕರಿಗೆ ಸರ್ಕಾರಿ ಹಾಗೂ ಖಾಸಗಿ ಕಂಪನಿಗಳಲ್ಲಿ ಉದ್ಯೋಗ ನೀಡಬೇಕು ಎಂದು ಮಂಗಳವಾರ ಬೆಳಗಾವಿಯ ಸುವರ್ಣ ಗಾರ್ಡನ್ ಬಳಿ ಕರ್ನಾಟಕ ರಾಜ್ಯ ಕಮ್ಮಾರ ಸಂಘದ ವತಿಯಿಂದ ಪ್ರತಿಭಟನೆ ನಡೆಸಿದರು ಕಮ್ಮಾರ ಸಮುದಾಯವನ್ನು ಪ್ರ ವರ್ಗ 2ಎ ಬೇರ್ಪಡಿಸಿ ಎಸ್ಟಿ ಗೆ ಸೇರಿಸಿ ಮೀಸಲು ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿದರು