ಮೈಸೂರು: ಕೆಲಸ ಕೊಡಿಸುವ ನೆಪದಲ್ಲಿ ಪರಿಚಿತನಾದ ಯುವಕನಿಂದ ಕಿರುಕುಳ: ಸರಸ್ವತಿಪುರಂ ಪೊಲೀಸರಿಗೆ ಯುವತಿ ದೂರು
Mysuru, Mysuru | Jun 10, 2025 ಯುವತಿಗೆ ಇಷ್ಟವಿಲ್ಲದಿದ್ದರೂ ಪ್ರೀತಿ ಮಾಡುತ್ತೇನೆಂದು ದುಂಬಾಲು ಬಿದ್ದು ಕಾಟ ನೀಡುತ್ತಿದ್ದ ಯುವಕನಿಂದ ನನಗೆ ರಕ್ಷಣೆ ಕೊಡಿ ಎಂದು ಯುವತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ನಗರದ ಸರಸ್ವತಿಪುರಂ ಪೊಲೀಸ್ ಠಾಣೆ ಮೆಟ್ಟಿಲೇರಿರುವ ದ ನೊಂದ ಯುವತಿ ರವಿಕಿರಣ್ ಎಂಬಾತನ ವಿರುದ್ದ ದೂರು ನೀಡಿದ್ದಾಳೆ. ಬೋಗಾದಿ ನಿರ್ಮಿತಿ ಕೇಂದ್ರದ ಬಳಿ ವಾಸವಿರುವ ಯುವತಿಗೆ ಕೆಲಸ ಕೊಡಿಸುವ ನೆಪದಲ್ಲಿ ರವಿಕಿರಣ್ ಎಂಬ ಯುವಕ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದು. ಇದೇ ವಿಚಾರವಾಗಿ ಇಬ್ಬರ ನಡುವೆ ಮಾತುಕತೆ ನಡೆದಿದೆ.