ಕೊಪ್ಪಳ: ಬಾಳು ಕೊಡುವುದಾಗಿ ನಂಬಿಸಿ ಕೈಕೊಟ್ಟ ವ್ಯಕ್ತಿ, ಪಟ್ಟಣದಲ್ಲಿ ಅಳಲು ತೋಡಿಕೊಂಡ ಮಹಿಳೆ
Koppal, Koppal | Apr 17, 2025 ಏಪ್ರಿಲ್ 16 ರಂದು ಬುಧವಾರ ಸಂಜೆ ಗಂಗಾವತಿ ಪಟ್ಟಣದಲ್ಲಿ ನೇತ್ರಾವತಿ ಎಂಬ ಮಹಿಳೆ ಮಾತನಾಡಿ, ದಾವಣಗೆರೆ ಜಿಲ್ಲೆಯ ಅಣಜಿ ಗ್ರಾಮದ ನಿವಾಸಿ ಎಂ ವೀರೇಶ್ ರವರು ಕೆಲ ವರ್ಷಗಳ ಹಿಂದೆ ಪರಿಚಯವಾಗಿ ಬೆಂಗಳೂರಿನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಮೋಸ ಮಾಡಿ ಸುಳ್ಳು ಹೇಳಿ ಮದುವೆಯಾಗಿದ್ದಾನೆ ಎಂದು ನೇತ್ರಾವತಿ ಆರೋಪ ಮಾಡಿ, ಬಾಳು ಕೊಡುವುದಾಗಿ ನಂಬಿಸಿ ಕೈಕೊಟ್ಟ ವ್ಯಕ್ತಿ ಎಂದು ಗಂಗಾವತಿಯಲ್ಲಿ ಅಳಲು ತೋಡಿಕೊಂಡ ಘಟನೆ ನಡೆದಿದೆ.