ಹುಬ್ಬಳ್ಳಿ ನಗರ: ನಗರದಲ್ಲಿ ಶ್ರೀ ಸಹಸ್ರಾರ್ಜುನ ಮಹಾರಾಜರ ಜಯಂತ್ಯೋತ್ಸವ
ಹುಬ್ಬಳ್ಳಿಯ ದಾಜೀಬಾನ್ ಪೇಟೆಯ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಶ್ರೀ ತುಳಜಾಭವಾನಿ ದೇವಸ್ಥಾನ ಕೇಂದ್ರ ಪಂಚ ಸಮಿತ ಹುಬ್ಬಳ್ಳಿ-ಧಾರವಾಡ ಆಶ್ರಯದಲ್ಲಿಂದು ಸಮಾಜದ ಕುಲಪುರುಷ ರಾಜರಾಜೇಶ್ವರ ಶ್ರೀ ಸಹಸ್ರಾರ್ಜುನ ಮಹಾರಾಜರ ಜಯಂತೋತ್ಸವ ನಿಮಿತ್ತವಾಗಿ ಶ್ರೀ ಸಹಸ್ರಾರ್ಜುನ ಮಹಾರಾಜರ ಬೆಳ್ಳಿ ಮೂರ್ತಿಯ ಭವ್ಯ ಮೆರವಣಿಗೆಯು ಜರುಗಿತು. ಈ ವೇಳೆ ಸಮಿತಿಯ ಚೀಪ್ ಟ್ರಸ್ಟಿ ಸತೀಶ್ ಮೆಹರವಾಡೆ, ಪ್ರಮುಖರಾದ ಭಾಸ್ಕರ್ ಜಿತೂರಿ, ನಾಗೇಶ್ ಕಲಬುರ್ಗಿ, ಅಶೋಕ ಕಾಟವೆ ಸೇರಿದಂತೆ ಮೊದಲಾದವರು ಉಪಸ್ಥಿತಿ ಇದ್ದರು.